Monday, April 6, 2020

ಇನ್ನೆಷ್ಟು ಕಾಲ ನಿನ್ನೊಡನಿದ್ದೇನು?
ನಿನ್ನ ಭೇಟಿಯಾದೇನು?
ದೂರವಿಲ್ಲ ಗೆಳತಿ
ನಮ್ಮನ್ನಗಲಿಸುವ ದಿನ
ಕಣ್ಣಂಚಿನಲ್ಲೇ ಜಿನುಗುತ್ತಿದ್ದ ಪ್ರೀತಿ
ಕಣ್ಮರೆಯಾಗುವ ದಿನ
 ಹೃದಯಗಳ ಮೌನ ಸಂಭಾಷಣೆ
ನೆನಪಿನ ಪುಟ ಸೇರುವ ದಿನ
ನಿನ್ನ ಕರೆಯ ರಿಂಗಣಕ್ಕಾಗಿ
ಪರಿತಪಿಸಬೇಕಾಗುವ ದಿನ
ನೀನು ನನ್ನವಳಲ್ಲ ಎಂಬುದ
ಖಚಿತಪಡಿಸುವ ದಿನ
ಆ ದಿನಕ್ಕೆ ನನ್ನ ಧಿಕ್ಕಾರವಿರಲಿ
ಆ ಕ್ಷಣಕ್ಕೆ ನನ್ನ ಶಾಪವಿರಲಿ..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ