ಅಂತರಾಳದ ದನಿ ಅಡಗಿಸುವಿರೇನು?
ಬಾಯಿ ಮುಚ್ಚಿಸುವವರು
ಅಂತರಾಳದ ದನಿ ಅಡಗಿಸುವರೇನು?
ದಬ್ಬಾಳಿಕೆಯ ಅಸ್ತ್ರದಿಂದ
ಮನಸ್ಸುಗಳ ಗೆಲ್ಲಬಲ್ಲರೇನು?
ದೌರ್ಜನ್ಯವೆಸಗುವವರು
ಜನರ ಪ್ರೀತಿಯಗಳಿಸುವರೇನು?
ಅವರು ಮರೆತಿರುವಿರೇನೋ
ಅನ್ಯಾಯ, ಅಧರ್ಮಗಳು ಬಹುಕಾಲ
ಬಾಳಲಾರವೆಂದು..
ಸತ್ಯ, ನ್ಯಾಯ, ಧರ್ಮಗಳೇ ಶಾಶ್ವತವೆಂದು..
ಸುಳ್ಳಾಡುವ ನೂರು ಜನರ
ನಾಯಕನಾಗುವುದಕ್ಕಿಂತ
ಸತ್ಯವಾಡುವ ಒಬ್ಬನ
ನಾಯಕನಾಗುವುದು ಲೇಸೆಂದು
ಇದ ತಿಳಿದವನು ಈ ಜಗವ ಗೆದ್ದಾನು
ತನ್ನ ಗುರಿ ತಲುಪಿಯಾನು...
ರಚನೆ: ನವೀನ ಬೂದನೂರು
ಬಾಯಿ ಮುಚ್ಚಿಸುವವರು
ಅಂತರಾಳದ ದನಿ ಅಡಗಿಸುವರೇನು?
ದಬ್ಬಾಳಿಕೆಯ ಅಸ್ತ್ರದಿಂದ
ಮನಸ್ಸುಗಳ ಗೆಲ್ಲಬಲ್ಲರೇನು?
ದೌರ್ಜನ್ಯವೆಸಗುವವರು
ಜನರ ಪ್ರೀತಿಯಗಳಿಸುವರೇನು?
ಅವರು ಮರೆತಿರುವಿರೇನೋ
ಅನ್ಯಾಯ, ಅಧರ್ಮಗಳು ಬಹುಕಾಲ
ಬಾಳಲಾರವೆಂದು..
ಸತ್ಯ, ನ್ಯಾಯ, ಧರ್ಮಗಳೇ ಶಾಶ್ವತವೆಂದು..
ಸುಳ್ಳಾಡುವ ನೂರು ಜನರ
ನಾಯಕನಾಗುವುದಕ್ಕಿಂತ
ಸತ್ಯವಾಡುವ ಒಬ್ಬನ
ನಾಯಕನಾಗುವುದು ಲೇಸೆಂದು
ಇದ ತಿಳಿದವನು ಈ ಜಗವ ಗೆದ್ದಾನು
ತನ್ನ ಗುರಿ ತಲುಪಿಯಾನು...
ರಚನೆ: ನವೀನ ಬೂದನೂರು
No comments:
Post a Comment