ತಿದ್ದಿದವರು, ತೀಡಿದವರು
ವಿದ್ಯೆ ಕಲಿಸಿ ಬುದ್ದಿ ನೀಡಿದವರು
ಓದಿಸಿದವರು ಬರೆಯಿಸಿದವರು
ಗೆದ್ದಾಗ ಬೆನ್ನು ತಟ್ಟಿದವರು
ಶಿಕ್ಷಿಸಿದವರು ಭಿಕ್ಷೆಯಿತ್ತವರು
ಬಿದ್ದಾಗ ಮೇಲಕ್ಕೆತ್ತಿದವರು
ಕೈಹಿಡಿದವರು ಮುನ್ನಡೆಸಿದವರು
ಅಂಧಕಾರವ ತೊಲಗಿಸಿದವರು
ಅಜ್ಞಾನ ಅಳಿಸಿ, ಸುಜ್ಞಾನ ಬೆಳೆಸಿ
ಅರಿವಿನ ಬೆಳಕು ನೀಡಿದವರು
ಅಶಾಂತಿ ತೊಲಗಿಸಿ, ಶಾಂತಿ ನೆಲೆಸಿ
ಬದುಕಿನ ಮಾರ್ಗ ತೋರಿದವರು
ಇವರು ನನ್ನವರು, ನನ್ನ ಶಿಕ್ಷಕರು..
ರಚನೆ: ನವೀನ ಬೂದನೂರು
ವಿದ್ಯೆ ಕಲಿಸಿ ಬುದ್ದಿ ನೀಡಿದವರು
ಓದಿಸಿದವರು ಬರೆಯಿಸಿದವರು
ಗೆದ್ದಾಗ ಬೆನ್ನು ತಟ್ಟಿದವರು
ಶಿಕ್ಷಿಸಿದವರು ಭಿಕ್ಷೆಯಿತ್ತವರು
ಬಿದ್ದಾಗ ಮೇಲಕ್ಕೆತ್ತಿದವರು
ಕೈಹಿಡಿದವರು ಮುನ್ನಡೆಸಿದವರು
ಅಂಧಕಾರವ ತೊಲಗಿಸಿದವರು
ಅಜ್ಞಾನ ಅಳಿಸಿ, ಸುಜ್ಞಾನ ಬೆಳೆಸಿ
ಅರಿವಿನ ಬೆಳಕು ನೀಡಿದವರು
ಅಶಾಂತಿ ತೊಲಗಿಸಿ, ಶಾಂತಿ ನೆಲೆಸಿ
ಬದುಕಿನ ಮಾರ್ಗ ತೋರಿದವರು
ಇವರು ನನ್ನವರು, ನನ್ನ ಶಿಕ್ಷಕರು..
ರಚನೆ: ನವೀನ ಬೂದನೂರು
No comments:
Post a Comment