Friday, April 4, 2025

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ.

ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ.

-ಎನ್.ಬಿ


 ಮನದ ಬೀದಿಯಲ್ಲಿ 

ನಿನ್ನಂತೆ ನಡೆದವರು ಯಾರಿಲ್ಲ..

ಎದೆಯ ಗೋಡೆಯ ಮೇಲೆ

ನಿನ್ನಂತೆ ಗೀಚಿದವರು ಯಾರಿಲ್ಲ..

ಕನಸಿನ ಹಕ್ಕಿಗೆ ನಿನ್ನಂತೆ

ರೆಕ್ಕೆ ಕಟ್ಟಿದವರು ಯಾರಿಲ್ಲ.

- ಎನ್.ಬಿ

 ನೀನೇ ಒಡೆದ ಬದುಕಿದು 

ನಡೆಯುತಿದೆ ಹೇಗೋ ಉಸಿರ ಬಿಗಿ ಹಿಡಿದು 

ಒತ್ತರಿಸಿ ಬರುವ ಭಾವಗಳಿಗೆ 

ತತ್ತರಿಸಿದೆ ಹೃದಯ

ಮತ್ತೆ ನೆನಪಾಗಿ ಕಾಡದಿರು

- ಎನ್.ಬಿ


 ನಿನ್ನ ಅಷ್ಟೂ ನೋವುಗಳೂ 

ನನ್ನ ನೋವುಗಳೇ 

ಎಷ್ಟು ಸಾಧ್ಯವೋ ಅಷ್ಟನ್ನೂ

ಹಂಚಿಕೊಂಡಬಿಡು

ಎಲ್ಲವನ್ನೂ ಬರಸೆಳೆದು 

ಅಪ್ಪಿಕೊಂಡು ಬಿಡುವೆ

ಬದುಕಿನ ನೋವು ನಿನ್ನೊಬ್ಬಳನ್ನೇ 

ಕಿತ್ತು ತಿನ್ನದಿರಲಿ..

- ಎನ್.ಬಿ 


 ಬದುಕಿನ ಎಲ್ಲ ಸಂಜೆಗಳಲ್ಲೂ 

ನಿನ್ನ ನೆನಪಿನ ನಾಳೆಗಳ ಕೊರಗಿದೆ

ಮುಗಿಯದ ವಿರಹದ ಹಾಡಿಗೆ

ನಿನ್ನ ಸಾಂಗತ್ಯದ ದನಿಬೇಕಿದೆ.

-ಎನ್.ಬಿ

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ