Friday, July 3, 2020

ಪ್ರೇಮ ನೀವೇದನೆಗೆ ಹಾತೊರೆಯುತ್ತಾ
ಆತುರಾತುರವಾಗಿ ಬಂದವ
ಮಾರ್ಗ ಮಧ್ಯವೇ ಮನೆಗೆ ಮರಳಿದೆ..
ನಿನ್ನ ಮೌನಕ್ಕೆ ಮನಸೋತಿದ್ದವ
ಮೌನ ಮುರಿಯುವ ದಾರಿ ಕಾಣದೆ..
- ಎನ್.ಬಿ

ನೀನು ನನ್ನ ಮೌನ
ಬಯಸಿರುವೆ ನಿಜ..
ಮಾತು ನಿಲ್ಲಿಸುವುದು
ನನಗೆ ಕಷ್ಟವೇನೂ ಅಲ್ಲ;
ಕೊಂಚ ಯೋಚಿಸು,
ನನ್ನ ಮೌನ ಮಾತಿಗಿಂತ
ಹೆಚ್ಚು ಕಿರಿಕಿರಿಯಾದುದು..
- ಎನ್.ಬಿ
ನಿನ್ನ ಪ್ರೇಮ ನಿರಾಕರಣೆಯ
ಮಾತುಗಳು ನಿಜವಾಗಿದ್ದರೆ
ನಿರೀಕ್ಷಿಸುವುದನ್ನೇ ಬಿಡುತ್ತಿದ್ದೆ;
ಮಾತಿನಲ್ಲಿದ್ದ ತಿರಸ್ಕಾರ
ಕಂಗಳಲ್ಲಿ ಇರಲೇಯಿಲ್ಲವಲ್ಲ..!
- ಎನ್.ಬಿ

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ