Monday, April 6, 2020

ಅದೆಷ್ಟೋ ಭಾವನೆಗಳ
ಹಂಚಿಕೊಳ್ಳ ಬಯಸಿದ್ದೆ
ಅದಕ್ಕೆಂದಿಗೂ ನೀ
ಅವಕಾಶವನ್ನೇ ನೀಡಲಿಲ್ಲ
ಭಾವನೆಗಳ ವಿನಿಮಯಕ್ಕೆ ಬಂದ
ನನಗೆ ದೊರೆತದ್ದು ನಿರಾಸೆ; ಹತಾಶೆ
ಅದೆಷ್ಟು ಬಾರಿ ಮನ ನಿನಗೆಂದು
ಮಿಡಿಯಿತೋ,
ನಿನ್ನೊಲವಿಗಾಗಿ ತುಡಿಯಿತೋ
ತುಡಿದು ಮಿಡಿದ ಮನ ಇಂದು
ಮೂಕವಾಗಿ ಕುಳಿತಿದೆ..
ಮನದ ವಿರುದ್ಧ ಮಾತುಗಳು
ಪ್ರತಿಭಟನೆಗಿಳಿದಿವೆ;
ಮೌನಕ್ಕೆ ಜಾರಿವೆ...

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ