ಹತ್ತಿರ ಬಂದಷ್ಟು ದೂರ ನಿಲ್ಲುವೆಯೇಕೆ?
ನನ್ನೆಡೆಗೆ ನಿನ್ನೀ ಉದಾಸೀನತೆಯೇಕೆ?
ನಿನ್ನೊಳಗಿನ ಈ ಮೌನಕ್ಕೆ ಕಾರಣವೇನು?
ನಿನ್ನೊಲವನರಸಿದ್ದೇ ನನ್ನ ತಪ್ಪೇನು?
ಈ ತಿರಸ್ಕಾರಗಳಲ್ಲೂ ಮನ
ನಿನ್ನನೇ ಬಯಸಿದೆಯೇಕೆ?
ನಾ ತಿಳಿದಿರುವೆ ಗೆಳತಿ ನಾನಿಲ್ಲದೆಯೂ
ನೀ ಸಂತಸದಿಂದಿರುವೆಯೆಂದು..
ಅದ ತಿಳಿದೇ ನಿರ್ಧರಿಸಿರುವೆ
ನಿನ್ನಿಂದ ದೂರಾಗಬೇಕೆಂದು..
ಮತ್ತೆಂದೂ ನಿನ್ನಡೆಗೆ ಸುಳಿಯಬಾರದೆಂದು;
ನಿನ್ನೊಲವ ಬಯಸಬಾರದೆಂದು..
ಸದಾ ಬಯಸುವೆ ನೀ ಸುಖವಾಗಿರಲೆಂದು..
ರಚನೆ: ನವೀನ ಬೂದನೂರು
ನನ್ನೆಡೆಗೆ ನಿನ್ನೀ ಉದಾಸೀನತೆಯೇಕೆ?
ನಿನ್ನೊಳಗಿನ ಈ ಮೌನಕ್ಕೆ ಕಾರಣವೇನು?
ನಿನ್ನೊಲವನರಸಿದ್ದೇ ನನ್ನ ತಪ್ಪೇನು?
ಈ ತಿರಸ್ಕಾರಗಳಲ್ಲೂ ಮನ
ನಿನ್ನನೇ ಬಯಸಿದೆಯೇಕೆ?
ನಾ ತಿಳಿದಿರುವೆ ಗೆಳತಿ ನಾನಿಲ್ಲದೆಯೂ
ನೀ ಸಂತಸದಿಂದಿರುವೆಯೆಂದು..
ಅದ ತಿಳಿದೇ ನಿರ್ಧರಿಸಿರುವೆ
ನಿನ್ನಿಂದ ದೂರಾಗಬೇಕೆಂದು..
ಮತ್ತೆಂದೂ ನಿನ್ನಡೆಗೆ ಸುಳಿಯಬಾರದೆಂದು;
ನಿನ್ನೊಲವ ಬಯಸಬಾರದೆಂದು..
ಸದಾ ಬಯಸುವೆ ನೀ ಸುಖವಾಗಿರಲೆಂದು..
ರಚನೆ: ನವೀನ ಬೂದನೂರು
No comments:
Post a Comment