ನಿನ್ನ ನಯನಗಳ ಸೆಳೆತ
ನನ್ನ ಮನವನ್ನೇ ಮೂಕವಾಗಿಸಿದೆ..
ಆ ನೋಟದ ತೀವ್ರತೆಗೆ ಜಗವನೇ
ಮರೆಸುವ ಶಕ್ತಿಯಿದೆ..
ಬೇಸರಗೊಂಡ ನಿನ್ನ ಮೊಗ
ನನ್ನ ಬುದ್ದಿಯನೇ ಮಂಕಾಗಿಸಿದೆ..
ಪ್ರತಿಕ್ಷಣವೂ ಈ ಮನ
ನಿನ್ನ ಸನಿಹವನೇ ಬಯಸುತಿದೆ..
ನಿನ್ನ ಸಾನಿಧ್ಯವೊಂದಿದ್ದರೆ
ಈ ಜಗದ ಹಂಗೇ ಬೇಡವೆನಿಸಿದೆ..
ನಿನಗಾಗಿ ಪರಿತಪಿಸುತಿರುವ ಈ
ಹೃದಯವನೊಮ್ಮೆ ತಣಿಸುವೆಯೇನು?
ಮನದೊಳಗಿನ ಸಂಘರ್ಷಗಳಿಗೆ
ಪರಿಹಾರ ಒದಗಿಸುವೆಯೇನು?
ರಚನೆ: ನವೀನ ಬೂದನೂರು
ನನ್ನ ಮನವನ್ನೇ ಮೂಕವಾಗಿಸಿದೆ..
ಆ ನೋಟದ ತೀವ್ರತೆಗೆ ಜಗವನೇ
ಮರೆಸುವ ಶಕ್ತಿಯಿದೆ..
ಬೇಸರಗೊಂಡ ನಿನ್ನ ಮೊಗ
ನನ್ನ ಬುದ್ದಿಯನೇ ಮಂಕಾಗಿಸಿದೆ..
ಪ್ರತಿಕ್ಷಣವೂ ಈ ಮನ
ನಿನ್ನ ಸನಿಹವನೇ ಬಯಸುತಿದೆ..
ನಿನ್ನ ಸಾನಿಧ್ಯವೊಂದಿದ್ದರೆ
ಈ ಜಗದ ಹಂಗೇ ಬೇಡವೆನಿಸಿದೆ..
ನಿನಗಾಗಿ ಪರಿತಪಿಸುತಿರುವ ಈ
ಹೃದಯವನೊಮ್ಮೆ ತಣಿಸುವೆಯೇನು?
ಮನದೊಳಗಿನ ಸಂಘರ್ಷಗಳಿಗೆ
ಪರಿಹಾರ ಒದಗಿಸುವೆಯೇನು?
ರಚನೆ: ನವೀನ ಬೂದನೂರು
No comments:
Post a Comment