Monday, April 6, 2020

ಓ ಮುದ್ದು ಮೌನವೇ
ನಾನೆಂದರೆ ನಿನಗದೆಷ್ಟು ಅಕ್ಕರೆ
ನನ್ನವರೇ ನನ್ನಿಂದ ದೂರಹೋದರೂ
ನೀ ಮಾತ್ರ ನನ್ನ ಸಂಗವ ತೊರೆಯಲಿಲ್ಲ
ನನ್ನ ಕೋಪದಲ್ಲಿ, ಬೇಸರದಲ್ಲಿ, ನೋವಲ್ಲಿ
ನೀ ನನ್ನೊಡನೆಯೇ ಇರುವೆಯಲ್ಲ
ಮೂರ್ಖರು ವಾದಕ್ಕಿಳಿದಾಗಲೂ
ನೀ ನನಗೆ ಜೊತೆಯಾಗುವೆಯಲ್ಲ
ನನ್ನಿಂದ ದೂರಾಗುವ ಪ್ರಯತ್ನವನೂ
 ನೀ ಎಂದಿಗೂ ಮಾಡಲಿಲ್ಲ
ನಮ್ಮಿಬ್ಬರ ಮೈತ್ರಿ ಅದೆಷ್ಟು ಜನ್ಮಗಳದ್ದೋ
ನಾನಂತೂ ತಿಳಿದಿಲ್ಲ..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ