ಶತೃವಿನ ಅಸಹಾಯಕತೆಯ
ಬಂಡವಾಳವಾಗಿಸಿಕೊಂಡವ
ಅವನ ಮನವ ಅರಿವನೇನು?
ಕೊಲೆ, ಸುಲಿಗೆಯಲ್ಲಿಯೇ
ತಲ್ಲೀನನಾದವನಿಗೆ ಅಂತಃಕರಣದ
ಮಾತು ಕೇಳುವುದೇನು?
ರಕ್ತದ ದುರ್ಘಮ ಹತ್ತಿದವಗೆ
ಶಾಂತಿಯ ಪರಿಮಳ
ಹಿಡಿಸುವುದೇನು?
ದ್ವೇಷದ ಜ್ವಾಲೆಯ ಹೊದ್ದವಗೆ
ಪ್ರೀತಿಯ ತಂಗಾಳಿ
ಹಿತವಾಗುವುದೇನು?
ನರಕದಲ್ಲೇ ಸ್ವರ್ಗ ಕಂಡವಗೆ
ಸ್ವರ್ಗದ ಸುಖ
ರುಚಿಸುವುದೇನು?
- ನವೀನ ಬೂದನೂರು
ಬಂಡವಾಳವಾಗಿಸಿಕೊಂಡವ
ಅವನ ಮನವ ಅರಿವನೇನು?
ಕೊಲೆ, ಸುಲಿಗೆಯಲ್ಲಿಯೇ
ತಲ್ಲೀನನಾದವನಿಗೆ ಅಂತಃಕರಣದ
ಮಾತು ಕೇಳುವುದೇನು?
ರಕ್ತದ ದುರ್ಘಮ ಹತ್ತಿದವಗೆ
ಶಾಂತಿಯ ಪರಿಮಳ
ಹಿಡಿಸುವುದೇನು?
ದ್ವೇಷದ ಜ್ವಾಲೆಯ ಹೊದ್ದವಗೆ
ಪ್ರೀತಿಯ ತಂಗಾಳಿ
ಹಿತವಾಗುವುದೇನು?
ನರಕದಲ್ಲೇ ಸ್ವರ್ಗ ಕಂಡವಗೆ
ಸ್ವರ್ಗದ ಸುಖ
ರುಚಿಸುವುದೇನು?
- ನವೀನ ಬೂದನೂರು
No comments:
Post a Comment