Monday, April 6, 2020

ಇವಳು ನನ್ನವಳು
ಕಣ್ಣಲ್ಲೇ ಕೊಲ್ಲುವವಳು
ಅನುರಾಗ ಅರಳಿಸುವವಳು
ಬಳ್ಳಿಯಂತೆ ಬಳುಕುವವಳು
ನವಿಲನ್ನೂ ನಾಚಿಸುವವಳು
ಕನಸಲೂ ಕಾಡುವವಳು
ಚಂದಿರನ ಮೊಗದವಳು
ಮಗುವಿನ ಮನದವಳು
ಗುಲಾಬಿಯ ನಗುವಿನವಳು
ಕಡಲೊಳಗಿನ ಮುತ್ತಿವಳು
ಪ್ರಶಾಂತ ಮನದವಳು
ನನ್ನ ಹೃದಯ ಕದ್ದವಳು;
ಮನಸು ಗೆದ್ದವಳು
ಇವಳು ನನ್ನವಳು..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ