Monday, April 6, 2020

ಗಾಂಧಿ
ಪ್ರತಿಯೊಂದು ನಿನ್ನ ಬಳಿಯಿತ್ತು
ಅಪಾರವಾದ ಪಾಂಡಿತ್ಯವಿತ್ತು
ಅಚ್ಚುಕಟ್ಟಾದ ಕುಟುಂಬವಿತ್ತು
ಜೀವನ ನಡೆಸಲು ವಕೀಲಿ ವೃತ್ತಿಯಿತ್ತು
ತಂದೆ-ತಾಯಿಯರ ಹಾರೈಕೆಯಿತ್ತು
ಜೊತೆಗೆ ಅವರು ಕಲಿಸಿದ ಸಂಸ್ಕೃತಿಯಿತ್ತು;
 ಸಂಸ್ಕಾರವಿತ್ತು
ಆದರೂ
ನೀನೇಕೆ ಬೀದಿಗಿಳಿಯಬೇಕಿತ್ತು
ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಿತ್ತು
ವೈಯಕ್ತಿಕ ನಿಂದನೆಗೆ ಗುರಿಯಾಗಬೇಕಿತ್ತು
ಮನೆಯಲ್ಲಿ ಕುಳಿತ ಟೀಕಿಸುವವರಿಗೇನು ಗೊತ್ತು
ದಾಸ್ಯ ಬದುಕಿನ ಗಮ್ಮತ್ತು
ನಾವಂತೂ ಮರೆತಿಲ್ಲ ನಿನ್ನ ಹೋರಾಟದ ನೀಯತ್ತು
ಆರಾಧಿಸುವೆವು ನಿನ್ನ ಯಾವತ್ತೂ...
ನೀನೇ ಅಲ್ಲವೇ ನಮ್ಮೆಲ್ಲರ ಸಂಪತ್ತು..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ