Monday, April 6, 2020

ಉಸಿರನಿತ್ತವಳು

ತನ್ನ ಜೀವ ಪಣಕ್ಕಿಟ್ಟು
ನಮಗೆ ಜನ್ಮ ನೀಡಿದವಳು
ತನ್ನ ಮಡಿಲಿನಲಿ ನಮ್ಮ ಬೆಳೆಸಿದವಳು
ನಮ್ಮ ನಲಿವಿನಲಿ ತನ್ನ ನೋವ ಮರೆತವಳು
ಅಪ್ಪನ ಕೋಪದಿಂದ ನಮ್ಮ ರಕ್ಷಿಸಿದವಳು
ನಮ್ಮ ಭವಿಷ್ಯಕ್ಕೆ ತನ್ನ ವರ್ತಮಾನ ನೀಡಿದವಳು
ನಮ್ಮ ನೋವಿಗೆ ತಾನು ಕಂಬನಿ ಮಿಡಿದವಳು
ನಮ್ಮ ತಪ್ಪುಗಳ ತಿದ್ದಿ ತೀಡಿದವಳು
ನಮ್ಮ ಬದುಕಿಗೆ ಸಂಸ್ಕಾರ ನೀಡಿದವಳು
ನಿಷ್ಕಾರಣವಾಗಿ ಪ್ರೀತಿಸಿದವಳು
ಸೋಲು-ಗೆಲುವಿನಲಿ ಬೆನ್ನಿಗೆ ನಿಂತವಳು
ಸಹನೆಯ ಕಡಲಿವಳು
ಮಮತೆಯ ಮಾತೆಯಿವಳು
ಭೂಮಿಯ ತೂಕದವಳು
ನನಗೆ ಜನ್ಮಕೊಟ್ಟವಳು; ಉಸಿರನಿತ್ತವಳು..

ರಚನೆ : ನವೀನ ಬೂದನೂರು












No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ