Monday, April 6, 2020

ಅವಳೆಂದೂ ಈ ಪ್ರೀತಿಯ
ಬಯಸಲಿಲ್ಲ,  ಆ
ಆಲೋಚನೆಯನೂ ಮಾಡಲಿಲ್ಲ
ಎಲ್ಲವನೂ ನಿನಗೆ ನೀನೇ
ಕಲ್ಪಿಸಿಕೊಂಡೆಯಲ್ಲ..
ನಿನ್ನೀ ಕೃತ್ಯಗಳಿಗೆ ಅವಳ
ದೂಷಿಸುವುದೇಕೆ?
ನಿನ್ನಂತರಾತ್ಮವ ಮೊದಲು
ನೀನು ಗೌರವಿಸಬಾರದೇಕೆ?
ತನ್ನ ತಾನೇ ಗೌರವಿಸಿಕೊಳ್ಳದವ
ಇತರರಿಂದ ಎಲ್ಲವನೂ
 ನಿರೀಕ್ಷಿಸುವುದೇಕೆ?
ಅವಳು ನಿನ್ನವಳಲ್ಲ ಎಂಬ
ಸತ್ಯವ ಒಪ್ಪಿಕೊಳ್ಳಲಾರೆಯೇಕೆ?

ರಚನೆ: ನವೀನ ಬೂದನೂರು

2 comments:

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ