ಶತಮಾನಗಳು ಉರುಳಿದರೇನು?
ಕಾಲಗಳು ಬದಲಾದರೇನು?
ನಿನ್ನ ಮೇಲಿನ ಕ್ರೌರ್ಯ ನಿಂತಿದೆಯೇನು?
ಸ್ತ್ರೀಯಾಗಿ ಹುಟ್ಟಿರುವುದೇ ನಿನ್ನ ತಪ್ಪೇನು?
ಸಹನಶೀಲಳಾಗಿ ಉಳಿಯುವೆ
ಮಹಾಮಾಯಿಯಾಗಿ ಬೆಳಗುವೆ
ತ್ಯಾಗಜೀವಿಯಾಗಿ ಬಾಳುವೆ
ಅವರ ಮೂಗಿನ ನೇರಕ್ಕೆ ನೀನಿದ್ದರೆ
ರಕ್ಕಸಿಯ ಪಟ್ಟ ಪಡೆಯುವೆ
ಚಾರಿತ್ರ್ಯವ ಕಳೆದುಕೊಳ್ಳುವೆ
ಅಶ್ಲೀಲ ಪದಗಳಿಗೆ ಗುರಿಯಾಗುವೆ
ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದರೆ
ನಾನಂತೂ ನಿನ್ನ ಪೂಜಿಸುವೆ
ಗೌರವಿಸಿ ಬಾಳುವೆ
ನೀ ಸಹಿಸಿದ ಅನ್ಯಾಯವ ನನೆದು..
- ನವೀನ ಬೂದನೂರು
ಕಾಲಗಳು ಬದಲಾದರೇನು?
ನಿನ್ನ ಮೇಲಿನ ಕ್ರೌರ್ಯ ನಿಂತಿದೆಯೇನು?
ಸ್ತ್ರೀಯಾಗಿ ಹುಟ್ಟಿರುವುದೇ ನಿನ್ನ ತಪ್ಪೇನು?
ಸಹನಶೀಲಳಾಗಿ ಉಳಿಯುವೆ
ಮಹಾಮಾಯಿಯಾಗಿ ಬೆಳಗುವೆ
ತ್ಯಾಗಜೀವಿಯಾಗಿ ಬಾಳುವೆ
ಅವರ ಮೂಗಿನ ನೇರಕ್ಕೆ ನೀನಿದ್ದರೆ
ರಕ್ಕಸಿಯ ಪಟ್ಟ ಪಡೆಯುವೆ
ಚಾರಿತ್ರ್ಯವ ಕಳೆದುಕೊಳ್ಳುವೆ
ಅಶ್ಲೀಲ ಪದಗಳಿಗೆ ಗುರಿಯಾಗುವೆ
ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದರೆ
ನಾನಂತೂ ನಿನ್ನ ಪೂಜಿಸುವೆ
ಗೌರವಿಸಿ ಬಾಳುವೆ
ನೀ ಸಹಿಸಿದ ಅನ್ಯಾಯವ ನನೆದು..
- ನವೀನ ಬೂದನೂರು
No comments:
Post a Comment