Monday, April 6, 2020

ಭಾವನೆಯ ಆಗಸದಲಿ
ಆಸೆಗಳ ಮೋಡ ಕಟ್ಟಿ
ಪ್ರೀತಿಯ ಮಳೆ ಸುರಿಯುವ
ಮುನ್ನವೇ..ಮರೆಯಾದೆಯೇತಕೆ?

ಮಳೆಯ ಹನಿಯು ಭೂಮಿಗಿಳಿದು
ಒಲವಿನ ಮರ ಚಿಗುರೊಡೆದು
ಮಿಗ-ಖಗಗಳಿಗಾಸರೆಯಾಗುವ
ಮುನ್ನವೇ....ಮರೆಯಾದೆಯೇತಕೆ?

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ