Monday, April 6, 2020

ಪಂಡಿತ್ ಪುಟ್ಟರಾಜ ಗವಾಯಿಗಳು

ನಿನ್ನ ಗಾನ ಮಾಧುರ್ಯಕ್ಕೆ ಶರಣು ಹೋಗದವರಿಲ್ಲ
ಬೇಡಿ ಬಂದವರಿಗೆ ಕರುಣೆ ತೋರಿದೆಯಲ್ಲ
ಅಂಧರ ಪಾಲಿನ ಆಶಾಕಿರಣವಾಗಿ
ನೊಂದ ಮನಗಳಿಗೆ ಗಾನಾಮೃತವುಣಿಸಿದೆಯಲ್ಲ
ಗುರುವಿನ ನೆಚ್ಚಿನ ಶಿಷ್ಯನಾಗಿ
ಅಶಕ್ತರ ಪಾಲಿನ ಶಕ್ತಿಯ ಗಣಿಯಾದೆಯಲ್ಲ
ಸಂಗೀತ ಲೋಕದ ಗಾನ ಗಾರುಡಿಗನಾಗಿ
ಮಧುರ ಕಂಠದಿಂದ ನಮ್ಮೆದೆಯ ತುಂಬಿದೆಯಲ್ಲ
ಕನ್ನಡಿಗರ ಹೃದಯ ಸಾಮ್ರಾಟನಾಗಿ
ನಿನ್ನ ಸ್ವರದಿಂದಲೇ ನಮ್ಮ ಮರುಳರಾಗಿಸಿದೆಯಲ್ಲ
ವೈಕಲ್ಯಗಳ ಮಧ್ಯೆಯೂ ಕೌಶಲ್ಯಗಳ ಬೆಳೆಸಿದ ಗುರುವೇ...
ನಿನ್ನ ನೆನೆಯದೇ ಈ ಜೀವಕೆ ತೃಪ್ತಿಯಿಲ್ಲ; ಮುಕ್ತಿಯಿಲ್ಲ..

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ