ನೀವು ಹೊಟ್ಟೆತುಂಬಿದವರು ಹೇಳುತ್ತೀರಿ
ಹಣದಿಂದ ಸಂತಸವ ಕೊಳ್ಳಲಸಾದ್ಯವೆಂಬ ಮಾತನ್ನು
ದವಾಖಾನೆಗೆ ಕಟ್ಟಲು ಹಣವಿಲ್ಲದೇ ತನ್ನವರನ್ನು
ಕಳೆದುಕೊಂಡವರು ಹೇಳುವರೇನು ಈ ಮಾತನ್ನು..?
ಸಾಲಭಾದೆಯಿಂದ ನೊಂದು ಆತ್ಮಹತ್ಯೆಗೆ ಶರಣಾದ
ರೈತನ ಮನೆಯರು ಹೇಳಿಯಾರೇನು ಈ ಮಾತನ್ನು..?
ಖಾಸಗಿ ಸಂಸ್ಥೆಗಳಲ್ಲಿ ಅಲ್ಪಹಣಕ್ಕೆ ಬೆಟ್ಟದಷ್ಟು ಕೆಲಸ ಮಾಡುವ ನೌಕರ ಹೇಳಿಯಾನೇನು ಈ ಮಾತನ್ನು..?
ಹಣವಿಲ್ಲದೇ ಮಕ್ಕಳಿಗೆ ಶಿಕ್ಷಣಕೊಡಿಸಲಾಗದ ಪೋಷಕರು ಹೇಳಿಯಾರೇನು ಈ ಮಾತನ್ನು..?
ಒಂದೊತ್ತಿನ ಊಟಕ್ಕೂ ಗತಿಯಿಲ್ಲದೇ ಬಿಕ್ಷೆಬೇಡಿ ಬದುಕುವ ಜನ ಹೇಳಿಯಾರೇನು ಈ ಮಾತನ್ನು..?
ಹೊಟ್ಟೆತುಂಬಿದ ನಿಮಗೇನು ಗೊತ್ತು ಹಣದಿಂದ ಸಿಗುವ ಸಂತಸ..
ಒಂದೊಂದು ಪೈಸೆಗೂ ಲೆಕ್ಕಹಾಕುವ ನನ್ನಂತಹ ನರಮಾನವನಿಗೆ ಗೊತ್ತು ಅದರ ಉತ್ಸಾಹ ಉಲ್ಲಾಸ..
- ನವೀನ ಬೂದನೂರು

No comments:
Post a Comment