Monday, April 6, 2020

ನಾ ಕಂಡ ದೇವರುಗಳು

ನಾ ಕಂಡಿದ್ದೇನೆ ದೇವರನ್ನು
ನಮಗಾಗಿ ದುಡಿದ ತಂದೆಯಲ್ಲಿ
ನಮಗಾಗಿ ಮಿಡಿದ ತಾಯಿಯಲ್ಲಿ
ಜ್ಞಾನ ದಾಸೋಹ ಮಾಡಿದ ಗುರುವಿನಲ್ಲಿ
ಜೀವ ದಾನ ಮಾಡಿದ ವೈದ್ಯರಲ್ಲಿ
ದುಃಖದ ಮೂಲ ತಿಳಿಸಿದ ಬುದ್ಧನಲ್ಲಿ
ಕಾಯಕಯೋಗಿ ಬಸವಣ್ಣನಲ್ಲಿ
ಅಹಿಂಸೆಯ ಸಂದೇಶ ನೀಡಿದ ಗಾಂಧಿಯಲ್ಲಿ
ಸಮಾನತೆಗಾಗಿ ಶ್ರಮಿಸಿದ ಬಾಬಾ ಸಾಹೇಬರಲ್ಲಿ
ಮಾನವೀಯ ಮೌಲ್ಯಗಳ ಸಾರಿದ ದಾರ್ಶನಿಕರಲ್ಲಿ
ನಾ ನಿತ್ಯವೂ ದೇವರ ಕಾಣುತ್ತಿರುವೆ ಇವರೆಲ್ಲರಲಿ
ನಿಜಕ್ಕೂ ನಾ ಆಸ್ತಿಕ ಇವರೆಲ್ಲರ ವಿಷಯದಲ್ಲಿ

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ