Monday, April 6, 2020

ಅಂದದ ತನುವಿಗೆ
ಚಂದದ ಸೀರೆಯುಟ್ಟು
ಬಿಂಕದಿ ನಡೆಯುವವಳ
ಸುಳಿವೇ ಇಲ್ಲವಲ್ಲ ಬೀದಿಯಲ್ಲಿ

ಅದರಗಳ ನಡುವಲ್ಲಿ
ಬಾನಗಲ ನಗುಚೆಲ್ಲಿ
ಆದರದಿ ನೋಡುವವಳ
ಸುಳಿವೇ ಇಲ್ಲವಲ್ಲ ಬೀದಿಯಲ್ಲಿ

ಆಸೆಗಳ ಬಾಂದಳದಿ
ಬಣ್ಣಗಳ ಬೆಳಕುಚೆಲ್ಲಿ
ಹೃದಯವನ್ನು ಕದ್ದವಳ
ಸುಳಿವೇ ಇಲ್ಲವಲ್ಲ ಬೀದಿಯಲ್ಲಿ

- ನವೀನ ಬೂದನೂರು


No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ