Monday, April 6, 2020

ನನ್ನಿಂದ ನೀ ದೂರಾದ ಮಾತ್ರಕ್ಕೆ
ನಿನ್ನ ನಾ ದೂರುವೆನೇನು?
ಇದ್ದಷ್ಟು ಕಾಲ ನೀ ನೀಡಿದ್ದು
ಪ್ರೀತಿಯನ್ನೇ ಅಲ್ಲವೇನು?
ಉಪಚಾರ ಮಾಡಿದವರಿಗೆ
ಅಪಚಾರ ಬಯಸುವವ ನಾನೇನು?
ನೀ ಕೊಟ್ಟ ನೆನಪುಗಳ ಮರೆತರೆ
ನಾ ಕೃತಜ್ಞನಾಗುವುದಿಲ್ಲವೇನು?
ಸನ್ನಿವೇಶಗಳು ನಮ್ಮನ್ನಗಲಿಸಿದಾಗ
ನಿನ್ನ ದೂರಿ ಪ್ರಯೋಜನವೇನು?
ವೈರಿಯನ್ನೂ ಪ್ರೀತಿಸುವ ಹೃದಯ
ತನ್ನ ಆತ್ಮವನ್ನೇ ಶಪಿಸಲು ಸಾಧ್ಯವೇನು?
ಜೊತೆಗಿದ್ದಾಗ ಹೊಗಳಿ; ದೂರಾದಾಗ
ತೆಗಳಿದರೆ, ದೈವ ಮೆಚ್ಚವುದೇನು?

ರಚನೆ: ನವೀನ ಬೂದನೂರು

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ