ಅವತರಿಸಿ ಬಾ
ನಮ್ಮನ್ನೇ ಸೃಷ್ಟಿಸಿದ ನೀನು
ನಮ್ಮ ಬಳಿಯೇ ಬೇಡುವೆಯೇನು?
ಜೀವಿಗಳ ಸೃಷ್ಟಿಸಿದ ನೀನು
ಅವುಗಳ ರುಚಿ ಸವಿಯಬೇಕೇನು?
ಎಲ್ಲರ ಕಾಯುವ ನೀನು
ಕೊಲ್ಲುವುದ ಸಹಿಸುವೆಯೇನು?
ಶಾಂತಿ ಪ್ರಿಯನಾದ ನೀನು
ನರಳಾಟವ ಆಲಿಸುವೆಯೇನು?
ಕರುಣಾಮಯಿಯಾದ ನೀನು
ಕಠೋರನಾಗುವೆಯೇನು?
ರಕ್ಷಕನಾಗುವ ಬದಲು
ಭಕ್ಷಕನಾಗುವೆಯೇನು?
ತ್ರಿಲೋಕ ಜ್ಞಾನಿಯಾದ ನಿನಗೆ
ಮಧ್ಯವರ್ತಿಗಳು ಬೇಕೇನು?
ಸರ್ವವ್ಯಾಪಿಯಾದ ನೀನು
ಶಾಖೆಗಳ ಸ್ಥಾಪಿಸಿಕೊಂಡಿರವೆಯೇಕೆ?
ಅವತರಿಸು ಬಾ ತಂದೆ
ಅಧರ್ಮವ ಅಳಿಸಿ,
ಧರ್ಮ ಸಂಸ್ಥಾಪಿಸಲು
ಅಶಾಂತಿಯ ತೊಲಗಿಸಿ
ಶಾಂತಿಯ ನೆಲೆಗೊಳಿಸಲು
ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಲು..
ರಚನೆ: ನವೀನ ಬೂದನೂರು
ನಮ್ಮನ್ನೇ ಸೃಷ್ಟಿಸಿದ ನೀನು
ನಮ್ಮ ಬಳಿಯೇ ಬೇಡುವೆಯೇನು?
ಜೀವಿಗಳ ಸೃಷ್ಟಿಸಿದ ನೀನು
ಅವುಗಳ ರುಚಿ ಸವಿಯಬೇಕೇನು?
ಎಲ್ಲರ ಕಾಯುವ ನೀನು
ಕೊಲ್ಲುವುದ ಸಹಿಸುವೆಯೇನು?
ಶಾಂತಿ ಪ್ರಿಯನಾದ ನೀನು
ನರಳಾಟವ ಆಲಿಸುವೆಯೇನು?
ಕರುಣಾಮಯಿಯಾದ ನೀನು
ಕಠೋರನಾಗುವೆಯೇನು?
ರಕ್ಷಕನಾಗುವ ಬದಲು
ಭಕ್ಷಕನಾಗುವೆಯೇನು?
ತ್ರಿಲೋಕ ಜ್ಞಾನಿಯಾದ ನಿನಗೆ
ಮಧ್ಯವರ್ತಿಗಳು ಬೇಕೇನು?
ಸರ್ವವ್ಯಾಪಿಯಾದ ನೀನು
ಶಾಖೆಗಳ ಸ್ಥಾಪಿಸಿಕೊಂಡಿರವೆಯೇಕೆ?
ಅವತರಿಸು ಬಾ ತಂದೆ
ಅಧರ್ಮವ ಅಳಿಸಿ,
ಧರ್ಮ ಸಂಸ್ಥಾಪಿಸಲು
ಅಶಾಂತಿಯ ತೊಲಗಿಸಿ
ಶಾಂತಿಯ ನೆಲೆಗೊಳಿಸಲು
ದುಷ್ಟರ ಶಿಕ್ಷಿಸಿ, ಶಿಷ್ಟರ ರಕ್ಷಿಸಲು..
ರಚನೆ: ನವೀನ ಬೂದನೂರು
No comments:
Post a Comment