Friday, September 8, 2023

 ಒಮ್ಮೆ ನೋಡಬೇಕು ನಿನ್ನ

ಬೆಳಕಿಳಿದು ಸಂಜೆಗೆ ಮೈಚೆಲ್ಲುವ ಮುನ್ನ

ಎಷ್ಟು ಸಾಗಿರುವೆ ಈ ಬಾಳ ಪಯಣದಲಿ

ಹಿಂದಿರುಗಿ ನೋಡಿದರೆ ಸುಳಿವಿಲ್ಲ ನೀನಲ್ಲಿ.. 

ಮತ್ತೆ ನೀ ಸಿಗಬೇಕು

ನಿನ್ನೊಡನೆ ಸಾಗಬೇಕು

ಬದುಕಲ್ಲಿ ಮಾಗಬೇಕು 

ನಾ ಗೆದ್ದು ಬೀಗಬೇಕು 

ನಿನ್ನ ಸಾಂಗತ್ಯದಲ್ಲಿ..

- ಎನ್.ಬಿ

No comments:

Post a Comment

 ಕೆಲವು ಸೋಲುಗಳು ಬರಿಯ ಸೋಲುಗಳಾಗಿರುವುದಿಲ್ಲ. ಎದೆಯೊಡಲಿಗಿಟ್ಟ ಮುಳ್ಳುಗಳಾರುತ್ತವೆ. -ಎನ್.ಬಿ